Close

    National Cleanliness Movement

    Publish Date: September 26, 2024

    WhatsApp Image 2024-09-26 at 08.47.57 (2)
    WhatsApp Image 2024-09-26 at 08.47.57
    WhatsApp Image 2024-09-26 at 08.47.58

    ನೆಮ್ಮದಿಯ ನಾಳೆಗಳಿಗಾಗಿ ನಾವು ಪರಿಸರವನ್ನು ಕಾಪಾಡಿಕೊಳ್ಳಬೇಕಿದೆ. -ರಾಜೇಶ್ವರಿ ಎನ್ ಹೆಗಡೆ

    ನಮ್ಮ ಪರಿಸರವನ್ನು ಕಾಪಾಡುವ ಪ್ರಕ್ರಿಯೆ ಸಾರ್ವಜನಿಕವಾಗಿ ಮೊದಲಬಾರಿಗೆ 2014ರಲ್ಲಿ ಭಾರತ ಸರ್ಕಾರದಿಂದ ಸ್ವಚ್ಛತಾ ಅಭಿಯಾನವನ್ನು ಆರಂಭಿಸಲಾಯಿತು.ಈ ವರ್ಷದ ಘೋಷವಾಕ್ಯ,ಸ್ವಭಾವ ಸ್ವಚ್ಛತಾ -ಸಂಸ್ಕಾರ ಸ್ವಚ್ಛತಾ ಆಗಿದೆ.ಇದು ನಮ್ಮ ಸ್ವಭಾವಗಳಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮತ್ತು ನಮ್ಮ ಬದುಕಿನ ಆಚಾರ,ವಿಚಾರಗಳಲ್ಲಿಯೂ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕಿದೆ.
    ನಾವು ತಿನ್ನುವ ಆಹಾರ ಸ್ವಚ್ಛ,ಶುದ್ಧವಾಗಿದ್ದರೆ,ಸದೃಢ ಶರೀರವನ್ನು ಹೊಂದಬಹುದು.ನಾವು ದೈಹಿಕವಾಗಿ ಸದೃಢರಾದಾಗ,ಮಾನಸಿಕವಾಗಿಯೂ ಸಹ ಸಶಕ್ತ ವಿಚಾರಗಳು ಉಂಟಾಗಿ ದೇಶ ಪ್ರಗತಿಯತ್ತ ಸಾಗುತ್ತದೆ.ನಮ್ಮ ಮೈ -ಮನಸ್ಸುಗಳನ್ನೂ ಕೂಡ ಸ್ವಚ್ಛವಾಗಿಟ್ಟುಕೊಳ್ಳಬೇಕಾಗಿದೆ.

    ಇಂದು ಮಾಡಿದ ಸಣ್ಣ ಸಣ್ಣ
    ಕೆಲಸಗಳೇ ನಾಳೆಗೆ
    ದೊಡ್ಡ ಕಲಿಕೆಗಳಾಗಿರುತ್ತವೆ.ಯಾವುದನ್ನೂ ಅಲಕ್ಷ್ಯ ಮಾಡಬಾರದು.
    ವ್ಯಾಪಾರಿಗಳು ಪ್ಲಾಸ್ಟಿಕ್ ಮುಕ್ತ ವಹಿವಾಟುಗಳಿಗೆ ಆದ್ಯತೆ ನೀಡಲು ಹಾಗೂ ಸ್ವಚ್ಛ ,ಶುದ್ಧ ಆಹಾರವನ್ನು ಸರಬರಾಜು ಮಾಡಲು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗಡೆಯವರು ಕರೆ ನೀಡಿದರು.
    ಯಾವ ಒಂದು ಜೀವಿಯೂ ತನಗಾಗಿ
    ಅಥವಾ ತಾನೊಂದೇ ಜೀವಿಸುವುದಿಲ್ಲ.ಮುಂದಿನ
    ಪೀಳಿಗೆಗಾಗಿ,ನಾಳೆಗಳಿಗಾಗಿ ನಾವು ಈ ಪ್ರಪಂಚವನ್ನು ಕಾಪಾಡಬೇಕಿದೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆಯವರು ನುಡಿದರು.ದಾವಣಗೆರೆ ನಗರದ ಹೃದಯ ಭಾಗದಲ್ಲಿರುವ ಬೀದಿಬದಿ ಆಹಾರ ವ್ಯಾಪಾರಿಗಳಿಗಾಗಿ ಜಿಲ್ಲಾ ನ್ಯಾಯಾಂಗ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಾವಣಗೆರೆ,ಮಹಾನಗರ ಪಾಲಿಕೆ,ಆಹಾರ ಸುರಕ್ಷತಾ ಮತ್ತು ಪರಿಸರ ಇಲಾಖೆಗಳು ಜಂಟಿಯಾಗಿ ಆಯೋಜಿಸಿದ್ದ
    ಸ್ವಚ್ಛತಾ ಅಭಿಯಾನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ಸ್ವಚ್ಛವಾಗಿದ್ದರೆ ದೇಶವು ಸ್ವಚ್ಛವಾಗಿರುವುದು ಎಂಬುದು ಮಹಾತ್ಮ ಗಾಂಧಿಯವರು ಕಂಡ ಕನಸು.ಸಾರ್ವಜನಿಕರ ಹೊಣೆಗಾರಿಕೆ ಬಹಳ ದೊಡ್ಡದು.
    ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ನಗರದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಯುಕ್ತರಾದ ರೇಣುಕಾ ನುಡಿದರು.
    ಏಕಬಳಕೆ ಪ್ಲಾಸ್ಟಿಕ್ ಬಿಸಾಡುವುದನ್ನು ನಿಷೇಧಿಸಲಾಗಿದೆ.ಕರ್ನಾಟಕದಲ್ಲಿ ಎಲ್ಲಾ ತರಹದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಸಹ ನಿಷೇಧವಿದೆ.ಆದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿಕೊಳ್ಳಬೇಕಿದೆ ಎಂದು ಪರಿಸರ ನಿಯಂತ್ರಣ ಅಧಿಕಾರಿ ರಾಜಶೇಖರ್ ನುಡಿದರು.
    ಕಲುಷಿತ ಆಹಾರ,ನೀರು,ಮತ್ತು ಸೇವಿಸುವ ಗಾಳಿಯಿಂದ ನೇರವಾಗಿ ರೋಗಗಳು ಮನುಷ್ಯರನ್ನು ಆಹುತಿ ತೆಗೆದುಕೊಳ್ಳುತ್ತಿವೆ.ದೈಹಿಕ ಸ್ವಚ್ಛತೆ ಬಹಳ ಮುಖ್ಯ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ,ಹಾಗೂ ತಂಬಾಕು ನಿಯಂತ್ರಣಾಧಿಕಾರಿ ಗಳಾದ ಡಾ.ರಾಘವನ್ ನುಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶರಾದ ಪ್ರವೀಣ್ ಕುಮಾರ್,ಹಿರಿಯ ಸಿವಿಲ್ ನ್ಯಾಯಾಧೀಶರುಗಳಾದ ಅಮರ್,ನಾಗೇಶ್ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾವೀರ್ ಕರೆಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.ಪಾಲಿಕೆಯ ಅಭಿಯಂತರರಾದ ಜಗದೀಶ್ ಕಾರ್ಯಕ್ರಮವನ್ನು ನಿರೂಪಿಸಿದರು.