ಮುಕ್ತಾಯ ಮಾಡು

    ಇ-ಸೇವಾ ಕೇಂದ್ರ

    ಪ್ರಕಟಿಸಿದ ದಿನಾಂಕ: ಎಫ್ ಜೆ, ವೈ

    ಸೇವಾ ಕೇಂದ್ರ

     

    (ದಾವೆದಾರರಿಗೆ ಮತ್ತು ವಕೀಲರಿಗೆ ಸೇವೆಗಳು)

     

    ಸೇವಾ ಕೇಂದ್ರವನ್ನು ದಾವಣಗೆರೆಯ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಸ್ಥಾಪಿಸಲಾಗಿದೆ, ಇದು ಸಾಮಾನ್ಯ ದಾವೆದಾರರಿಗೆ ಒಂದು ನಿಲುಗಡೆ ಕೇಂದ್ರವಾಗಿ ಕಾರ್ಯನಿರ್ವಹಿಸಲು ಮತ್ತು ಅವನ / ಅವಳ ಎಲ್ಲಾ ನ್ಯಾಯಾಲಯಕ್ಕೆ ಸಂಬಂಧಿಸಿದ ಅಗತ್ಯಗಳಿಗಾಗಿ ವಕೀಲರಿಗೆ ಸೇವೆ ಸಲ್ಲಿಸುತ್ತದೆ.

     

    ಸೇವಾ ಕೇಂದ್ರ ,ಸಹಾಯವಾಣಿ ಕೇಂದ್ರ ಮತ್ತು ವಿ.ಸಿ. ಕ್ಯಾಬಿನ್ ಸೌಲಭ್ಯಗಳು.

     
    • ಪ್ರಕರಣದ ಸ್ಥಿತಿ, ಮುಂದಿನ ವಿಚಾರಣೆಯ ದಿನಾಂಕ ಮತ್ತು ಪ್ರಕರಣದ ಇತರೆ ವಿವರಗಳ ಕುರಿತು ವಿಚಾರಣೆಗಳನ್ನು ನಿರ್ವಹಿಸುವುದು.

    • ರಜೆಯಲ್ಲಿರುವ ನ್ಯಾಯಾಧೀಶರ ವಿವರಗಳನ್ನು ಒದಗಿಸುವುದು.

    • ಕೋರ್ಟ್ ಗಳ ಮೊಬೈಲ್‍ ಅಪ್ಲಿಕೇಶನ್‍ ಡೌನ್‍ ಲೋಡ್‍ ಮಾಡಲು ಸಹಕರಿಸುವುದು.

    • ಪ್ರಮಾಣೀಕೃತ ನಕಲು ಅರ್ಜಿಯ ಸ್ಥಿತಿಯನ್ನು ಒದಗಿಸುವುದು.

    • ನಿರ್ದಿಷ್ಟ ನ್ಯಾಯಾಲಯದ ಸ್ಥಳ, ವ್ಯಾಜ್ಯಗಳ ಪಟ್ಟಿ ಮತ್ತು ಪ್ರಕರಣದ ಸ್ಥಿತಿ ಕುರಿತು ಮಾಹಿತಿ ಒದಗಿಸುವುದು.

    • ಫೈಲಿಂಗ್‍ ಕಾರ್ಯ ವಿಧಾನ, ಸಿಐಎಸ್‍ (ಕೇಸ್ ಇನ್ಫರ್ಮೇಷನ್ ಸಿಸ್ಟಮ್)ಗೆ ದಾಖಲೆಗಳನ್ನು ಅಪಲೋಡ್‍ ಮಾಡುವುದು ಮತ್ತು ಇಫೈಲಿಂಗ್‍ ವೆಬ್‍ ಸೈಟ್‍ನಲ್ಲಿ ಫೈಲಿಂಗ್‍ ಸಂಖ್ಯೆಯನ್ನು ಪಡೆಯುವ ವಿಧಾನದ ಬಗ್ಗೆ ಮಾರ್ಗದರ್ಶಿಸುವುದು.

    • ಕಾರಾಗೃಹ ಬಂಧನದಲ್ಲಿರುವವರನ್ನು, ಅವರ ಸಂಬಂಧಿಕರು ಭೇಟಿ ಮಾಡಲು ಇಮುಲಾಕಾತ್ (ವರ್ಚುವಲ್‍ ಭೇಟಿ) ಮುಖಾಂತರ ಕಾಯ್ದಿರಿಸಲು ಅನುಕೂಲ ಕಲ್ಪಸಿಕೊಡುವುದು.

    • ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯಿಂದ ಉಚಿತ ಕಾನೂನು ಸೇವೆಗಳನ್ನು ಪಡೆಯುವ ಬಗ್ಗೆ ಸಾರ್ವಜನಿಕರಿಗೆ ಮಾರ್ಗದರ್ಶಿಸುವುದು.

    • ನ್ಯಾಯಾಲಯದ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಏರ್ಪಡಿಸುವ ಮತ್ತು ನಡೆಸುವ ವಿಧಾನವನ್ನು ವಿವರಿಸುವುದು.

    • ಕೋರ್ಟ್ ಪ್ರಾಜೆಕ್ಟ್ ಅಡಿಯಲ್ಲಿ ಡಿಜಿಟಲಿ ಲಭ್ಯವಿರುವ ಸೌಲಭ‍್ಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಮಾಹಿತಿ ನೀಡುವುದು.

    ಗೂಗಲ್ ನಕ್ಷೆಯಲ್ಲಿ ಸ್ಥಳ