ಮುಕ್ತಾಯ ಮಾಡು

    ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಎನ್.ವಿ. ಅಂಜಾರಿಯಾ

    nvaj
    • ಹುದ್ದೆ: ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು

    ಗೌರವಾನ್ವಿತ ನ್ಯಾಯಮೂರ್ತಿ ಶ್ರೀ. ಎನ್. ವಿ. ಅಂಜಾರಿಯಾ: ಅಹಮದಾಬಾದ್‌ನಲ್ಲಿ ಮಾರ್ಚ್ 23, 1965 ರಂದು ಜನಿಸಿದರು; ಸ್ಥಳೀಯ ಮಾಂಡವಿ-ಕಚ್ಛ್; ವಕೀಲರ ಕುಟುಂಬದಿಂದ, ತಂದೆಯೂ ನ್ಯಾಯಾಂಗದಲ್ಲಿದ್ದರು; ಅಹಮದಾಬಾದ್‌ನ ಹೆಚ್.ಎಲ್.ಕಾಲೇಜ್ ಆಫ್ ಕಾಮರ್ಸ್‌ನಿಂದ ಪದವಿ ಪಡೆದರು. 1988 ರಲ್ಲಿ ಸರ್ L.A. ಷಾ ಕಾನೂನು ಕಾಲೇಜಿನಿಂದ LL.B. 1989 ರಲ್ಲಿ ಅಹಮದಾಬಾದ್‌ನ ಯೂನಿವರ್ಸಿಟಿ ಸ್ಕೂಲ್ ಆಫ್ ಲಾದಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

    ಆಗಸ್ಟ್ 1988 ರಿಂದ ಗುಜರಾತಿನ ಉಚ್ಚ ನ್ಯಾಯಾಲಯದಲ್ಲಿ ಶ್ರೀ ಎಸ್.ಎನ್ ಶೆಲತ್, ಹಿರಿಯ ವಕೀಲ, ಅವರ ಚೇಂಬರ್ ಸೇರುವ ಮೂಲಕ ಅಭ್ಯಾಸವನ್ನು ಪ್ರಾರಂಭಿಸಿದರು. ಸಾಂವಿಧಾನಿಕ ಸಮಸ್ಯೆಗಳು ಮತ್ತು ಸಿವಿಲ್ ಪ್ರಕರಣಗಳು, ಕಾರ್ಮಿಕ ಮತ್ತು ಸೇವೆಯ ಎಲ್ಲಾ ವರ್ಗಗಳನ್ನು ಒಳಗೊಂಡಿರುವ ವಿಷಯಗಳನ್ನು ನಿರ್ವಹಿಸಿರುತ್ತಾರೆ. ಹೈಕೋರ್ಟ್ ಮತ್ತು ಅಧೀನ ನ್ಯಾಯಾಲಯಗಳು, ರಾಜ್ಯ ಚುನಾವಣಾ ಆಯೋಗ, ಗುಜರಾತ್ ಮಾಹಿತಿ ಆಯೋಗ, ಗುಜರಾತ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್, ಪುರಸಭೆಗಳು ಇತ್ಯಾದಿಗಳಿಗೆ ಸ್ಥಾಯಿ ವಕೀಲರು / ಪ್ಯಾನಲ್ ವಕೀಲರಾಗಿದ್ದರು.

    ಗೌರವಾನ್ವಿತರು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನಲ್ಲಿ ಹಿರಿಯ ಪ್ಯಾನಲ್ ಕೌನ್ಸಿಲ್ ಆಗಿ, BSNL, ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC), ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (UGC), ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE), ಶಿಕ್ಷಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಮಂಡಳಿ (NCTE). ನ ಹಿರಿಯ ಸ್ಥಾಯಿ ಸಲಹೆಗಾರರಾಗಿ ಸೇವೆ ಸಲ್ಲಿಸಿರುತ್ತಾರೆ

    ಗೌರವಾನ್ವಿತರಿಗೆ ಅಹಮದಾಬಾದ್‌ನ ದಿವಂಗತ ಶ್ರೀ ನವೀನಚಂದ್ರ ದೇಸಾಯಿ ಫೌಂಡೇಶನ್‌ನಿಂದ 1992 ರಲ್ಲಿ ‘ಫ್ರೀಡಮ್ ಆಫ್ ವಾಕ್ ಮತ್ತು ಎಕ್ಸ್‌ಪ್ರೆಶನ್ – ವಿತ್ ರೆಫರೆನ್ಸ್ ಟು ಮೀಡಿಯಾ’ ಎಂಬ ವಿಷಯದ ಕುರಿತು ಸಂಶೋಧನಾ ಫೆಲೋಶಿಪ್ ಪ್ರಶಸ್ತಿ ನೀಡಲಾಯಿತು. ಗುಜರಾತ್ ಲಾ ಹೆರಾಲ್ಡ್ ನಲ್ಲಿ ಗೌರವಾನ್ವಿತ ಅಸೋಸಿಯೇಟ್ ಎಡಿಟರ್ ಆಗಿ ಸೇವೆ ಸಲ್ಲಿಸಿರುತ್ತಾರೆ. ಅಲ್ಲದೆ ಹೈಕೋರ್ಟ್ ಮಧ್ಯಸ್ಥಿಕೆ ಕೇಂದ್ರದಲ್ಲಿ ಮಧ್ಯವರ್ತಿ ತರಬೇತಿ ಸಹ ಪಡೆದಿರುತ್ತಾರೆ. ಪುಸ್ತಕಗಳು, ಕಾನೂನು ನಿಯತಕಾಲಿಕಗಳು ಇತ್ಯಾದಿಗಳಲ್ಲಿ ಪ್ರಕಟವಾದ ಸಾಂವಿಧಾನಿಕ ಮತ್ತು ಕಾನೂನು ವಿಷಯಗಳ ಕುರಿತು ಲೇಖನಗಳು, ಬರಹಗಳು ಇತ್ಯಾದಿಗಳನ್ನು ಕೊಡುಗೆ ನೀಡಿದ್ದಾರೆ; ಏಪ್ರಿಲ್ 2010 ರಲ್ಲಿ ಗುಜರಾತ್‌ನ ಹೈಕೋರ್ಟ್‌ನ ಗೋಲ್ಡನ್ ಜುಬಿಲಿ ಸೆಲೆಬ್ರೇಶನ್‌ಗಳ ಸಂದರ್ಭದಲ್ಲಿ ಪ್ರಕಟಿಸಲಾದ ಸ್ಮರಣಿಕೆಯಲ್ಲಿ ‘ಹೈ ಕೋರ್ಟ್ ಆಫ್ ಗುಜರಾತ್: ಅಡ್ವೆಂಟ್ ಅಂಡ್ ಅಸೆಂಟ್’ ಬರೆಯಲು ಅರ್ಹರಾಗಿದ್ದರು.

    ಗೌರವಾನ್ವಿತರನ್ನು 21 ನವೆಂಬರ್ 2011 ರಂದು ಗುಜರಾತ್‌ನ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಉನ್ನತೀಕರಿಸಲಾಯಿತು ಮತ್ತು 06.09.2013 ರಂದು ಖಾಯಂ ನ್ಯಾಯಾಧೀಶರಾದರು
    ಗೌರವಾನ್ವಿತರು 25.02.2024 ರಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.